July 23, 2025

ಮಂಗಳೂರು   ಜುಲೈ 23, 2025 ವಿದ್ಯಾರ್ಥಿಗಳಲ್ಲಿ ದಂತ ಆರೈಕೆಯ ಮಹತ್ವವನ್ನು ಸಾರುವ ಉದ್ದೇಶದಿಂದ, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಲೈಟ್ ಹೌಸ್ ಹಿಲ್ ರೋಡ್, ಮಂಗಳೂರಿನಲ್ಲಿ ದಂತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆನರಾ ನಂದಗೋಕುಲ್, ಕೋಡಿಯಲ್‌ಬೈಲ್ ಶಾಖೆಯ ಸಿ.ಏನ್.ಜಿ 3 ತರಗತಿಯ ಮಕ್ಕಳು ಭಾಗವಹಿಸಿದರು. 

 

ಕಾರ್ಯಕ್ರಮದಲ್ಲಿ ಹಲ್ಲುಗಳ ಶುದ್ಧತೆಯನ್ನು ಹೇಗೆ ಕಾಪಾಡುವುದು, ಒಳ್ಳೆಯ ಆಹಾರ ಮತ್ತು ಕೆಟ್ಟ ಆಹಾರಗಳ ವ್ಯತ್ಯಾಸ, ಹಾಗೂ ದಿನನಿತ್ಯದ ಹಲ್ಲು ಆರೈಕೆ ಬಗ್ಗೆ ಉಪಯುಕ್ತ ಸಲಹೆಗಳು ಮಕ್ಕಳಿಗೆ ನೀಡಲಾಯಿತು. ಮಕ್ಕಳಲ್ಲಿ ಜಾಗೃತಿ ಮೂಡಿಸುವ ದೆಸೆಯಲ್ಲಿ ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ನಂತರ ಮಕ್ಕಳಿಗೆ ಉಚಿತ ದಂತ ಆರೋಗ್ಯ ತಪಾಸಣೆ ಕೂಡಾ ನಡೆಸಲಾಯಿತು.

 

ಮಕ್ಕಳು ಈ ಕಾರ್ಯಕ್ರಮದಿಂದ ದಂತ ಆರೋಗ್ಯದ ಮಹತ್ವವನ್ನು ಅರ್ಥಮಾಡಿ ತಮ್ಮ ಹಲ್ಲುಗಳನ್ನು ಆರೋಗ್ಯಕರವಾಗಿ ಕಾಯ್ದುಕೊಳ್ಳುವ ಕುರಿತಾಗಿ ಬಹಳಷ್ಟು ಮಾಹಿತಿಯನ್ನು ಪಡೆದರು. ಈ ಜಾಗೃತಿ ಕಾರ್ಯಕ್ರಮವು ಮಕ್ಕಳಲ್ಲಿ ಆರೋಗ್ಯ ಕುರಿತ ಅರಿವು ಮೂಡಿಸುವ ಮಹತ್ವದ ಹಂತವಾಗಿಯೇ ಗುರುತಿಸಲ್ಪಟ್ಟಿತು. ಈ ಕಾರ್ಯಕ್ರಮವು Dr . ಅಶ್ವಿನ್ ರಾವ್,ಪ್ರೊಫೆಸರ್ ಮತ್ತು ಐ /ಸಿ ಡಿಪಾರ್ಟ್ಮೆಂಟ್ ಆಫ್ ಪೀಡಿಯಾಟ್ರಿಕ್ ಆಂಡ್ ಪ್ರಿವೆಂಟಿವ್ ಡೆಂಟಿಸ್ಟ್ರಿ  ಇವರ ನೇತೃತ್ವದಲ್ಲಿನಡೆಯಿತು